ಆರಾಮಾಗೆ ಇದ್ದೆ ನಾನು

ಗೋಕುಲ
ಜಯಂತ್ ಕಾಯ್ಕಿಣಿ
ಮನೋಮೂರ್ತಿ

ಆರಾಮಾಗೆ ಇದ್ದೆ ನಾನು

ನಿನ್ನ ಕ‍ಂಡು ಅರೆ ಏನಾಯಿತು

ಅರೆ ಏನಾಯಿತು, ಅಲೆ ಜೋರಾಯಿತು

ಬಲು ಸಿಹಿಯಾದ ಅಪಘಾತವಾಯಿತು

ಮರು ಮಾತಾಡದೆ ಖುಷಿ ನೂರಾಯಿತು

ಈ ವ್ಯಾಮೋಹ ವಿಪರೀತವಾಯಿತು || ಪ ||

ನೆನೆಯುತ ಬರೆದೆ ನೆನೆಯುತ‌

ಮನ ಇನ್ನೂನು ಭಾವುಕವಾಯಿತು

ಬಯಸುತ ಒಲವ ಬಯಸುತ‌

ಕ್ಷಣ ಒಂದೊಂದು ರೋಚಕವಾಯಿತು

ನಾನು ನೀನು ಕೂತುಕೊಂಡ ಜಾಗ‌

ನಮ್ಮ ಮಾತೆ ಆಡುತಾವೆ ಈಗ

ಪಿಸುಮಾತಾಡುತ ಅರೆ ಏನಾಯಿತು

ಸವಿ ಕನಸೊಂದು ಜೀವಂತವಾಯಿತು || ೧ ||

ಮರೆಯಿತು ಹೆಸರೆ ಮರೆಯಿತು

ಈ ಮುದ್ದಾದ ಮೋರೆಯ ನೋಡುತ

ಹೊರಟಿತು ಹೃದಯ ಹೊರಟಿತು

ನೀನಿದ್ದಲ್ಲೇ ಡೇರೆಯ ಹೂಡುತ

ಕಾಣದಂತೆ ಓಡಿಬಂದೆಯೇನು

ಕಾಡಿದಷ್ಟು ಪ್ರೀತಿ ಚೆಂದವೇನು

ಜೊತೆ ಒಡಾಡುತ ಅರೆ ಏನಾಯಿತು

ಈ ಬಡಜೀವ ಶ್ರೀಮಂತವಾಯಿತು || ೨ ||